ಅರ್ಥ ಕಳೆದುಕೊಳ್ಳುತ್ತಿರುವ ಕಾರ್ಮಿಕ ದಿನ

ಅರ್ಥ ಕಳೆದುಕೊಳ್ಳುತ್ತಿರುವ ಕಾರ್ಮಿಕ ದಿನ

Share

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಮೇ 1 ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನ ಎಂದು ಆಚರಿಸಲಾಗುತ್ತದೆ. ಈ ಕಾರ್ಮಿಕ ದಿನಾಚರಣೆಯ ಹಿನ್ನಲೆಯು ಆಸ್ಟ್ರೇಲಿಯಾ ಮತ್ತು ಅಮೇರಿಕಾ ದಿಂದ ಹುಟ್ಟಿದ್ದು ಆದರೇ ಅಲ್ಲಿ ಮೇ 1 ರಂದು ಕಾರ್ಮಿಕ ದಿನಾಚರಣೆ ಆಚರಿಸುವುದಿಲ್ಲ. ಕೆಂಪು ವರ್ಣೀಯ ಅಥವಾ ಕಮ್ಯುನಿಸ್ಟ್ ತತ್ವ ಸಿದ್ದಾಂಥಗಳ ಒತ್ತಡವು ಭಾರತದಂತಹ ಅಭಿವೃದ್ಧಿಶೀಲ ದೇಶಗಳ ಮೇಲೆ ಬಲವಂತವಾಗಿ ಹೇರಲ್ಪಡುತ್ತವೆ. ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಮೇ 1ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನವೆಂದು ಆಚರಿಸಿ ಕಾರ್ಮಿಕರಿಗೆ ಸಿಹಿ ಹಂಚಿಯೋ ಅಂದು ರಜಾ ನೀಡಿಯೋ ಸುಮ್ಮನಾಗುತ್ತಾರೆ. ಅದೇ ಚೀನಾ , ಅಮೇರಿಕಾ ಆಸ್ಟ್ರೇಲಿಯಾ ನಂತಹ ಮುಂದುವರೆದ ದೇಶಗಳು ಕಾರ್ಮಿಕ ವರ್ಗವನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡುತ್ತಾರೆ. ಅಂತರ್ ರಾಷ್ಟ್ರೀಂiÀi ಮಾನವ ಹಕ್ಕುಗಳು ಸಮಾನ ದುಡಿಮೆಗೆ ಸಮಾನ ವೇತನ ನೌಕರನಂತೆ ಸಾಮಾನ್ಯ ಕಾರ್ಮಿಕನಿಗೆ ನೈಸರ್ಗಿಕ ಭತ್ಯೆಗಳನ್ನು ನೀಡಬೇಕೆಂದು ಕಮ್ಯುನಿಸ್ಟ್ ವಾದವನ್ನು ನಮ್ಮಂತಹ ಪ್ರಗತಿ ಶೀಲ ದೇಶಗಳ ಮುಂದೆ ಮಾನವೀಯತೆ ಮರೆಯಾಗಿರುತ್ತವೆ. ಭಾರತದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲು ಮೇ 1 ಏಕೆಂದರೆ ಉತ್ತರವಿಲ್ಲ. 1886ರ ಸುಮಾರಿಗೆ ಮೇ 1 ರಂದು ಆಸ್ಟ್ರೇಲಿಯಾದಲ್ಲಿ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಮಾತ್ರ ಸಾಧ್ಯ ಎಂಬ ಹೋರಾಟ ಹೊತ್ತಿಕೊಂಡು ಅಮೇರಿಕದಲ್ಲಿಯೂ ಕೂಡ ಕಾರ್ಮಿಕ ದಂಗೆಗಳು ಮೇ 1 ರಿಂದ ಪ್ರಾರಂಭವಾಗಿದ್ದರಿಂದ ಮೇ 1ನ್ನು ಅಂತರ್ ರಾಷ್ಟ್ರೀಯ ಕಾರ್ಮಿಕ ದಿನವೆಂದು ಆಚರಿಸಲಾಗುತ್ತದೆ. ಆದರೇ ಅಮೇರಿಕ ಮತ್ತು ಆಸ್ಟ್ರೇಲಿಯಾಗಳಲ್ಲಿ ಅಲ್ಲ. ಭಾರತ ಮಟ್ದದಲ್ಲಿ ಹೇಳುವುದಾದರೇ ಕಾರ್ಮಿಕ ದಂಗೆಗಳು ಹಲವಾರು ನಡೆದಿವೆ. ಸೆಣಬು ಕಾರ್ಖಾನೆ ಕಾರ್ಮಿಕರ ದಂಗೆ, ರೈಲ್ವೆ ಕಾರ್ಮಿಕರ ದಂಗೆ, ಜವಳಿ ಕಾರ್ಮಿಕರ ದಂಗೆ , ಸರ್ಕಾರಿ ಮುದ್ರಣಾಲಯದ ಕೆಲಸಗಾರರ ದಂಗೆ ಹೀಗೆ ಬೆಳೆಯುತ್ತಾ ಹೋಗುತ್ತದೆ. ಅದರಲ್ಲಿಯೂ ಇತ್ತೀಚೆಗೆ ಅಂದರೆ ತಮಿಳುನಾಡಿನಲ್ಲಿ ದಿವಂಗತ ಜಯಲಲಿತ 2003 ರಲ್ಲಿ ಮುಷ್ಕರ ನಿರತ 1 ಲಕ್ಷದ 76 ಸಾವಿರ ಸರ್ಕಾರಿ ನೌಕರರು ಮತ್ತು ಶಿಕ್ಷಕರನ್ನು ವಜಾ ಮಾಡಿದ್ದು ಹೋರಾಟದ ಬಿಸಿಯಿಂದ ಮತ್ತೆ ಕೆಲಸಕ್ಕೆ ತೆಗೆದುಕೊಂಡಿದ್ದು ಇತಿಹಾಸದ ಪುಟದಲ್ಲಿ ಸ್ಪಷ್ಟವಾಗಿದ್ದರೂ ಕೂಡ ಮೇ 1ನ್ನು ನಾವೇಕೆ ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಬೇಕು?
ಇನ್ನೂ ಕಾರ್ಮಿಕ ದಿನಾಚರಣೆಯ ಅರ್ಥ ವ್ಯಾಪ್ತಿಯನ್ನು ಅರ್ಥೈಸುವುದಾದರೆ ಭಾರತವು ಅತ್ಯಂತ ಸಂಕೀರ್ಣ ಅರ್ಥ ವ್ಯವಸ್ಥೆಯ ದೇಶವಾಗಿದ್ದು ದೇಶದ ಅರ್ಥ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು, ಖಾಸಗೀ ನೌಕರರು ಮತ್ತು ಅಸಂಘಟಿತ ಕಾರ್ಮಿಕ ವರ್ಗ ಎಂದು 3 ವಲಯಗಳಾಗಿ ವಿಂಗಡಿಸಬಹುದು. ಅಸಂಘಟಿತ ವಲಯ ಎಂದರೆ ಗಾರ್ಮೆಂಟ್ಸ್ ಉಧ್ಯಮ, ಖಾಸಗೀ ವಾಹನ ಚಾಲಕರು, ಗುತ್ತಿಗೆ ಆಧಾರದ ನೌಕರರು ಮತ್ತು ಸಣ್ಣ ಪುಟ್ಟ ಕಛೇರಿ, ಅಂಗಡಿಗಳ ಕೆಲಸಗಾರರು ಸೇರುತ್ತಾರೆ. ಈ ವಲಯದಲ್ಲಿ ಕೆಲಸದ ಅತಂತ್ರದ ಜೊತೆಗೆ ಹಲವಾರು ಸವಾಲುಗಳನ್ನು ಕಾರ್ಮಿಕ ವರ್ಗವು ಅನುಭವಿಸುತ್ತಿದೆ. ಸರ್ಕಾರವಾಗಲೀ, ಉಧ್ಯಮದಾರರಾಗಲೀ, ಕಾರ್ಮಿಕವರ್ಗದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ. ಇನ್ನು ಕಾರ್ಮಿಕರ ಹೆಸರಿನಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡು ಕಾರ್ಮಿಕರ ಹಿತ ಕಾಯುವ ಬದಲು ತಮ್ಮ ಲಾಭಿ ಮಾಡಿಕೊಳ್ಳುವುದು. ಮೋಜು ಮಸ್ತಿಯಲ್ಲಿ ತೊಡಗುವುದು, ಮಾಲೀಕರ ಪರವಾಗಿ ನಿಂತು ಕಾರ್ಮಿಕರಿಗೆ ಅನ್ಯಾಯ ಮಾಡುವುದೇ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕಾರ್ಮಿಕರು ದಿನದ 10 ರಿಂದ 15 ಗಂಟೆಗಳ ಕಾಲ ಪ್ರಾಣಿಗಳಂತೆ ದುಡಿಯುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಏಕೆಂದರೆ ಜೀವನ ನಿರ್ವಹಣೆಗೆ, ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣ, ಬೆಲೆ ಏರಿಕೆಯಂತಹ ಪರಿಸ್ಥಿತಿಗಳು ಸಾಮಾನ್ಯ ಕಾರ್ಮಿಕನ ಮೇಲೆ ಬರೆ ಎಳೆಯುತ್ತಿದೆ. ಜೊತೆಗೆ ಭಾರತದಂತಹ ಅಭಿವೃದ್ಧಿ ಶೀಲ ದೇಶಗಳಲ್ಲಿ ನವ ಉಧ್ಯಮ ಸೇರಿದಂತೆ ಸಣ್ಣ ಮತ್ತು ಮಧ್ಯಮ ಗಾತ್ರದ ಉಧ್ಯಮ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಹೀಗೆ ಇರುವಾಗ ರಜಾಕ್ಕಾಗಿ, ಸಿಹಿಗಾಗಿ, ಮೋಜು ಮಸ್ತಿಗಾಗಿ ಮೇ 1 ನ್ನು ಕಾರ್ಮಿಕ ದಿನ ಎಂದು ಆಚರಿಸಲಾಗುತ್ತಿದೆ.


Share