8 ವರ್ಷದಿಂದ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ

8 ವರ್ಷದಿಂದ ಹಾಳಾಗಿರುವ ರಸ್ತೆಯನ್ನು ದುರಸ್ತಿ ಮಾಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ

Share

ಹರಿಹರ ತಾಲೂಕು ಚಿಕ್ಕಬಿದರಿ ಗ್ರಾಮದ ರಾಮ್ ಸೇನಾ ಕರ್ನಾಟಕ ಚಿಕ್ಕಬಿದರಿ ಘಟಕದ ವತಿಯಿಂದ ಕೊಡುವ ಮನವಿ ಅರ್ಜಿ ಏನೆಂದರೆ ಹರಿಹರ ತಾಲೂಕು ಚಿಕ್ಕಬಿದರಿ ರಸ್ತೆ ದುರಸ್ತಿ ಮಾಡುವ ಬಗ್ಗೆ ಮನವಿ.

ಚಿಕ್ಕಬಿದರಿ ಗ್ರಾಮವು ಹರಿಹರ ಪಟ್ಟಣಕ್ಕೆ ಕೇವಲ 15 ಕಿಲೋಮೀಟರ್ ಅಂತರದಲ್ಲಿ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಕನಿಷ್ಠ 5 ಗ್ರಾಮಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ.

ಈ ಎಲ್ಲಾ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಹಾಗೂ ನೌಕರ ಸಿಬ್ಬಂದಿಗಳು ದಿನಪ್ರತಿ ಹರಿಹರ ಪಟ್ಟಣಕ್ಕೆ ಬರಬೇಕಾಗುತ್ತದೆ.
ಆದರೆ ಇಲ್ಲಿ ಚಿಕ್ಕಬಿದರಿ ಗ್ರಾಮದಿಂದ ಹರಿಹರಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಇಂತಹ ರಸ್ತೆಗಳು ದಾವಣಗೆರೆ ಜಿಲ್ಲೆಯಲ್ಲಿ ಆಗಲಿ ಕರ್ನಾಟಕ ರಾಜ್ಯದಲ್ಲಿಯೇ ಕಾಣಸಿಗುವುದಿಲ್ಲ.

ಈ ಹಿಂದೆ ಸ್ಥಳೀಯ ಶಾಸಕರು ಹಾಗೂ ಸಂಸದರಿಗೂ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಇದರ ಉದ್ದೇಶವೇನೆಂದರೆ , ಉದ್ದೇಶಪೂರ್ವಕವಾಗಿಯೇ ಗಂಗನರಸಿ ಕ್ರಾಸ್ ನಿಂದ ದೀಟೂರು, ಪಮೇನಹಳ್ಳಿ, ಸಾರಥಿ, ಹಾಗೂ ಚಿಕ್ಕಬಿದರಿ ಗ್ರಾಮಗಳಿಗೆ ಮಾಡಿರುವ ಅನ್ಯಾಯವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಆದ್ದರಿಂದ ನಾವು ದಿನಾಂಕ 16 / 7/ 2021 ರಂದು ಸರಾಸರಿ 11 ಗಂಟೆಗೆ ನಮ್ಮ ರಾಮ್ ಸೇನಾ ಸಂಘಟನೆ ವತಿಯಿಂದ ಹಾಗೂ ಎಲ್ಲಾ ಗ್ರಾಮಗಳ ಸಾರ್ವಜನಿಕರು ಸೇರಿಕೊಂಡು ಗಂಗನರಸಿ ಕ್ರಾಸ್ ಶಿವಮೊಗ್ಗ ದಿಂದ ಹೊಸಪೇಟೆಗೆ ಹೋಗುವ ಎಲ್ಲಾ ವಾಹನಗಳನ್ನು ನಿಲ್ಲಿಸಿ (ತುರ್ತು ವಾಹನಗಳಿಗೆ ಅಡ್ಡಿಪಡಿಸದಂತೆ) ಪ್ರತಿಭಟನೆ ಕೈಗೊಂಡಿದ್ದೇವೆ ಆದ್ದರಿಂದ ತಾವುಗಳು ಸಹ ಪ್ರತಿಭಟನೆಗೆ ಸಹಕರಿಸಬೇಕೆಂದು ತಮ್ಮಲ್ಲಿ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ.

ವರದಿ ,,, ಫಕಿರೇಶ್ ಯಾದವ್


Share

Leave a Reply

Your email address will not be published. Required fields are marked *