ಬೆಂಗಳೂರಿನಲ್ಲಿ ಆಟೋ ರಾಮಣ್ಣ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

ಬೆಂಗಳೂರಿನಲ್ಲಿ ಆಟೋ ರಾಮಣ್ಣ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ

Share

ಕನ್ನಡ ಚಿತ್ರರಂಗದ ಅಪ್ರತಿಮ ನಾಯಕ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಅಭಿಮಾನಿ ಆಟೋ ರಾಮಣ್ಣನವರ ಆಟೋ ರಾಮಣ್ಣ ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮ ಬೆಂಗಳೂರಿನ ಮಲ್ಲೇಶ್ವರಂ 18ನೇ ಕ್ರಾಸ್ ರೇಣುಕಾಂಬ ಥಿಯೇಟರ್ ನಲ್ಲಿ ಚಿತ್ರ ರಸಿಕರ ನಡುವೆ ಸರಳವಾಗಿ ನಡೆಯಿತು. ಚಿಕ್ಕವಯಸ್ಸಿನಿಂದಲೂ ಮೆಟ್ರೋ ರಾಜ ಶಂಕರ್ ನಾಗ್ ರವರ ಅಭಿಮಾನಿಯಾಗಿದ್ದ ಈ ಆಟೋ ರಾಮಣ್ಣನವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮುನ್ನವೇ, ತನ್ನ ಹುಟ್ಟೂರಿನಲ್ಲಿ ಹಸು ಮೇಯಿಸಿ, ಪಟ್ಟಣದಲ್ಲಿ ಹೋಟೆಲ್ ಕೆಲಸಕ್ಕೆ ಸೇರಿ ಕ್ಲೀನರ್ ಆಗಿ, ನಂತರದ ವರ್ಷಗಳಲ್ಲಿ ಆಟೋ ಡ್ರೈವರ್ ಆಗಿ ಜನರ ಸಾರಥಿಯಾಗಿ ನೋಡುಗರಿಗೆ ಆಟೋ ರಾಮಣ್ಣ ಎಂದೇ ಹೆಸರನ್ನುಗಳಿಸಿಕೊಂಡು, ತನ್ನ ನಿರ್ದೇಶನದ ಕನ್ನಡ ಚಿತ್ರವೊಂದಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಸಂಭಾಷಣೆ ಸಾಹಸ ಗಾಯನ ನೃತ್ಯದ ಜೊತೆಗೆ ನಿರ್ಮಾಣ ಮಾಡಿದ್ದಾರೆ ಎಂದರೆ, ನಿಜಕ್ಕೂ ಅಚ್ಚರಿಯೇ ; ಹಾಗೇ ಸಿನಿಮಾ ಯುವ ವರ್ಗದವರಿಗೆ ಸ್ಪೂರ್ತಿಯೇ ಹೌದು !

ಚಿತ್ರದ ನಾಯಕ ಆಟೋ ರಾಮಣ್ಣ ಮಾತನಾಡಿ ” ನನ್ನ ಸನ್ನಿಧಾನಕ್ಕೆ ಬಂದ 25 ಜನರ ಹುಡುಗಿಯರ ಭಾವಚಿತ್ರದಲ್ಲಿ ಯೋಗಶ್ರೀ ಹುಡುಗಿಯನ್ನು ನನ್ನ ಚಿತ್ರಕ್ಕೆ ಆಯ್ಕೆ ಮಾಡಿದಾಗ, ಕೆಲವರು ಈ ಹುಡುಗಿ ಮುಖ ಲಕ್ಷಣ ಚೆನ್ನಾಗಿಲ್ಲ ಎಂದರು. ಅವರ ಮಾತಿಗೆ ನಾನು ತಲೆಕೆಡಿಸಿಕೊಳ್ಳದೇ, ಅವಳ ಪ್ರತಿಭೆಯನ್ನು ಈ ಚಿತ್ರಕ್ಕೆ ಹಿಂಡಿ ಬಳಸಿಕೊಂಡಿದ್ದೇನೆ. ಅಲ್ಲದೇ ನನ್ನ ಚಿತ್ರದಲ್ಲಿ ಪ್ರತೀಕ್ಷಾ ಅನ್ನೋ ಹುಡುಗಿ ಚೆನ್ನಾಗಿ ಅಭಿನಯ ಮಾಡಿದೆ. ನಾನು ಚಿತ್ರರಂಗಕ್ಕೆ ಬರುವ ಮುನ್ನವೇ, ಹಲವು ಜನರ ಮಾತಿನಿಂದ ನೊಂದು ಅವಮಾನ ಗೊಂಡಿದ್ದೇನೆ. ಅವಮಾನಗಳೇ ನನಗೆ ಮೆಟ್ಟಿಲಾಗಿ ಸನ್ಮಾನ ಗಳಾಗಿವೆ. ನಾನು ಸಾಯುವ ಮುನ್ನ ಇತಿಹಾಸವನ್ನು ಸೃಷ್ಟಿಸಿ ಹೋಗಬೇಕೆನ್ನುವ ಬಯಕೆ ಇದೆ. ಚಿತ್ರರಂಗಕ್ಕೆ ನಾನು ಬರಲು ನನ್ನ ಹೆಂಡತಿಗೆ ಇಷ್ಟವಿರಲಿಲ್ಲ. ಬಂದ ನಂತರ ನನ್ನ ಹೆಂಡತಿ ವಿಷ ಕುಡಿದಳು ಅವಳನ್ನು ಬದುಕಿಸಿಕೊಳ್ಳಲು 50 ಸಾವಿರ ಬೇಕಾಯಿತು. ನಮ್ಮ ಸ್ನೇಹಿತರು ನನಗೆ ಸಹಾಯ ಮಾಡಿದರು ಅವರಿಗೆ ನಾನು ಅಭಾರಿ, ನನ್ನ ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸಿದರೆ, 10 ವರ್ಷದಲ್ಲಿ 50 ಚಿತ್ರವನ್ನು ತೆಗೆಯಬೇಕು ಎಂದುಕೊಂಡಿದ್ದೇನೆ ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯ ಎಂದರು.

ಸಾಹಿತಿ ದೊಡ್ಡರಂಗೇಗೌಡರು ಮಾತನಾಡಿ, ಈ ಚಿತ್ರಕ್ಕೆ ನಾನು ಸಹ ಆರು ಸನ್ನಿವೇಶಗಳಿಗೆ ಹಾಡುಗಳನ್ನು ಬರೆದಿರುವೆ, ಇಡೀ ಭಾರತೀಯ ಚಿತ್ರರಂಗವೇ ನೋಡುವ ಒಂದು ಗೋವಿನ ಹಾಡಿದೆ. ಆ ಹಾಡಿನ ಮೇಲೆ ನನಗೆ ವಿಶ್ವಾಸವಿದೆ ಒಬ್ಬ ಬರಹಗಾರನಾಗಿ ನಾನು ಹೇಳ್ತಾ ಇದ್ದೀನಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಆ ಹಾಡು ಜಯಭೇರಿ ಬಾರಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಇನ್ನೂ ಹಾಸ್ಯನಟ ಡಿಂಗ್ರೀ ನಾಗರಾಜು ಮಾತನಾಡಿ ” ನಾನು ಬೇರೆ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದಾಗ ಆಟೋ ರಾಮಣ್ಣ ನನ್ನ ಬಳಿ ಬಂದು, ಸರ್ ನಾನು ಚಿತ್ರ ಮಾಡ್ತಾ ಇದ್ದೀನಿ ನಾನು ದಿನಕ್ಕೆ ನಿಮಗೆ 5000 ಕೊಡ್ತೀನಿ ತಾವು ಒಪ್ಪಿ ಚಿತ್ರ ಮುಗಿಸಿ ಕೊಡಿ ಎಂದರು. ಆಗ ನಾನು ಒಪ್ಪಿಕೊಂಡು ನಂತರ ಬೆಳಿಗ್ಗೆ ನಾನು ಇದ್ದ ಕಡೆ ಆಟೋ ಬಂದಾಗ, ಸರ್ ಆಟೋ ಬಂದಿದೆ ಹೋಗೋಣ ಹತ್ತಿ ಎಂದರು. ನಾನು ಅವಾಗ ಇದೇನಪ್ಪಾ..! ಶೂಟಿಂಗ್ ಸ್ಥಳಕ್ಕೆ ಆಟೋದಿಂದ ಡ್ರಾಪ ಎಂದು ಆಶ್ಚರ್ಯಪಟ್ಟೆ, ಆದ್ರೂ ರಾಮಣ್ಣ ಶೂಟಿಂಗ್ ಮುಗಿಯುವ ತನಕ ಚಿತ್ರಕ್ಕೆ ಶ್ರಮಿಸಿರುವ ಎಲ್ಲರನ್ನೂ ಆಟೋದಿಂದಲೇ, ಶೂಟಿಂಗ್ ಸ್ಥಳದಿಂದ ಮನೆಗೆ ಮನೆಯಿಂದ ಶೂಟಿಂಗ್ ಸ್ಥಳಕ್ಕೆ ಡ್ರಾಪ್ ಮಾಡಿಸ್ತ ಇದ್ರು. ಆಟೋದಲ್ಲಿ ಅವರು ದುಡಿದು ಅದರಿಂದ ಬಂದ ಲಾಭದಲ್ಲಿ ಈ ಚಿತ್ರವನ್ನು ಮಾಡಿಯೇ ಇವತ್ತು ಧ್ವನಿಸುರುಳಿ ಬಿಡುಗಡೆ ಮಾಡಿ ಇನ್ನೇನೋ, ಬಿಡುಗಡೆ ಹಂತಕ್ಕೆ ತಂದಿದ್ದಾರೆ ಎಂದರೇ, ಅವರಿಗೆ ದೊಡ್ಡದೊಂದು ಸಲಾಂ ಸಲ್ಲಿಸಬೇಕು. ಶೂಟಿಂಗ್ ಸ್ಥಳಕ್ಕೆ ಊಟವನ್ನು ಅಷ್ಟೇ, ಆಟೋದಲ್ಲಿ ತರಿಸುತ್ತಿದ್ದರು. ಕಲಾವಿದರಿಗೂ ಅಷ್ಟೇ ಸರಿಯಾದ ಸಮಯಕ್ಕೆ ಹಣ ಕೊಡುತ್ತಿದ್ದರು. ಈ ರಾಜ್ಯದಲ್ಲಿರುವ ಪ್ರತಿಯೊಬ್ಬ
ಆಟೋ ಡ್ರೈವರ್ ಗಳು ಸಿನಿಮಾ ನೋಡಿದ್ರೆ ಖಂಡಿತವಾಗಲೂ ಇವರು ಇನ್ನೊಂದು ಸಿನಿಮಾ ಮಾಡ್ತಾರೆ. ಈಗಾಗಲೇ ಅವರು ಕಥೆ ಬರೆದು ತಯಾರಿ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ಈ ಚಿತ್ರಕ್ಕೆ ಶುಭ ಹಾರೈಸಿದರು.

ವರದಿ : ಮಳವಳ್ಳಿ ಮಾದೇಶ್


Share

Leave a Reply

Your email address will not be published. Required fields are marked *