ಕೂರಿಗೆ ಭತ್ತ ಬಿತ್ತನೆಗೆ ಮುಂದಾದ ರೈತರು

ಕೂರಿಗೆ ಭತ್ತ ಬಿತ್ತನೆಗೆ ಮುಂದಾದ ರೈತರು

Share

ಬಳ್ಳಾರಿಯ ಸಿರುಗುಪ್ಪ ತಾಲೂಕಿನ ಬಂಡ್ರಾಳ್ ಹತ್ತಿರದ ನೆಹರು ಕ್ಯಾoಪಿನಲ್ಲಿ ನಾಗಭೂಷಣಂ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆ ಮಾಡುತ್ತಿರುವುದನ್ನು ಕೃಷಿ ಅಧಿಕಾರಿಗಳು ವೀಕ್ಷಿಸಿದರು.

ಮಳೆಗಾಲದ ಈ ಸಮಯದಲ್ಲಿ ಕಾಲುವೆ ನೀರನ್ನು ನಂಬಿ ಕೂರದೆ ಅಲ್ಪ ನೀರಿನಲ್ಲಿ ಭತ್ತ ಬೆಳೆಯುವ ಕೂರಿಗೆ ಬಿತ್ತನೆಗೆ ರೈತರು ಮುಂದಾಗಿದ್ದಾರೆ, ತಾಲೂಕಿನ ತುಂಗಭದ್ರಾ ಮತ್ತು ವೇದಾವತಿ ಹಗರಿ ಅಚ್ಚು ಕಟ್ಟು ಭಾಗದಲ್ಲಿ ನೇರ ಕೂರಿಗೆ ಭತ್ತದ ಬಿತ್ತನೆ ಪದ್ಧತಿ ಅಳವಡಿಸಿ ಕೊoಡಿರುವುದು ರೈತರಿಗೆ ವರದಾನವಾಗಿದೆ.
ಕಡಿಮೆ ಹೀರೋ ಸಮಯ ಕ್ಕೆ ಸರಿಯಾಗಿ ಬೆಳೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವಲ್ಲಿ ಈ ಪದ್ಧತಿ ಹೆಚ್ಚು ರೈತರಿಗೆ ಅನುಕೂಲ ಈಗಾಗಲೇ ತಾಲೂಕಿನಲ್ಲಿ ಸಾಕಷ್ಟು ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಬೆಳೆಯಲು ಮುಂದಾಗಿರುವುದಲ್ಲದೆ ಜೊತೆಗೆ ಪರ್ಯಾಯ ಬೆಳೆ ಬೆಳೆದು ಕೂಡ ಸೈ ಎನಿಸಿಕೊಡಿದ್ದಾರೆ.
ತಾಲೂಕಿನ ಹಚ್ಚೋಳ್ಳಿ, ತೆಕ್ಕಲಕೋಟೆ, ಕರೂರು, ಸಿರುಗುಪ್ಪ ಈ ನಾಲ್ಕು ಹೋಬಳಿಯ ಭಾಗಗಳಲ್ಲಿ 1000ಎಕರೆ ಪ್ರದೇಶದಲ್ಲಿ ಈ ಗಾಗಲೇ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಮಾಡಿದ್ದು ಜುಲೈ ಅಂತ್ಯದವರೆಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಈ ಪದ್ಧತಿ ಬಿತ್ತನೆ ಮಾಡಲಿದ್ದಾರೆ.

ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿಯ ಪ್ರತಿ ಎಕರೆಗೆ 25 ಸಾವಿರ ಖರ್ಚು ಮಾತ್ರ ಬರುತ್ತದೆ.
ಈ ಕೂರಿಗೆ ಭತ್ತ ಬಿತ್ತನೆಯಿಂದ ನಮಗೆ ಸಾಕಷ್ಟು ಲಾಭ, ಅನುಕೂಲ ಆಗಿದೆ. ನಾವು ಬೆಳೆದದ್ದನ್ನು ಕಂಡು ಸುತ್ತಮುತ್ತಲಿನ ಗ್ರಾಮದ ಕೆಲ ರೈತರು ಇದೇ ಮಾದರಿಯ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಈ ಪದ್ಧತಿಯನ್ನು ಎಲ್ಲಾರು ಅಳವಡಿಸಿಕೊಂಡರೆ ಹೆಚ್ಚು ಅನುಕೂಲವಾಗುತ್ತದೆ.ಈ ಕೃಷಿಯಿಂದ ಮಣ್ಣಿನ ಆರೋಗ್ಯ ಕಾಪಾಡುವ ಜೊತೆಗೆ ಭವಿಷ್ಯದ ಪೀಳಿಗೆಗೂ ನೆಮ್ಮದಿಯ ವಾತಾವರಣ ನಿರ್ಮಿಸಿ ಕೊಳ್ಳಬಹುದಾಗಿದೆ ಎನ್ನುತ್ತಾರೆ ನಾಗಭೂಷಣo ಸಾಂಪ್ರದಾಯಕ ನಾಟಿ ಪದ್ಧತಿಗೆ ಅಧಿಕ ನೀರು, ಹೆಚ್ಚು ಕೂಲಿಕಾರರು, ವ್ಯಾಪಕ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಬೀರುವ ಜೊತೆಗೆ ಮಣ್ಣಿನ ಮಾಲಿನ್ಯ ಫಲವತ್ತತೆ ಹಾಳಾಗುತ್ತದೆ.
ಆದರೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೂರಿಗೆ ಭತ್ತದ ಬಿತ್ತನೆ ರೈತರಿಗೆ ಹೆಚ್ಚು ವರದಾನ ಆಗಲಿದೆ, ತಾಲೂಕಿನ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಎಲ್ಲಾ ಕೊನೆಭಾಗದ ರೈತರು ನೀರಿನ ಸಮಸ್ಯೆಗೆ ಕೂರಿಗೆ ಭತ್ತದ ಬಿತ್ತನೆ ಪರಿಹಾರ ಮಾರ್ಗವಾಗಿದೆ. ಯಾವ ಪ್ರದೇಶದ ಭೂಮಿಗಳಲ್ಲಿ ಕೂರಿಗೆ ಬಿತ್ತನೆ ಮಾಡಲು ಸಾಧ್ಯವಿದೆಯೋ ಅಲ್ಲೆಲ್ಲಾ ಈ ಪದ್ದತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಲಾಗುತ್ತದೆ, ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಶೇ, 50 ರಿಂದ 60 ರಷ್ಟು ನೀರಿನ ಸಮಸ್ಯೆ ನಿಯಂತ್ರಿಸಬಹುದು ನಮ್ಮ ತಾಲೂಕಿನಲ್ಲಿ 5 ಸಾವಿರ ಎಕರೆ ಬಿತ್ತನೆ ಗುರಿ ಹೊಂದಿದ್ದು. ಈ ಗಾಗಲೇ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆ ನಿರೀಕ್ಷೆ ಇದೆ.

ನಜೀರ್ ಅಹಮ್ಮದ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಸಿರುಗುಪ್ಪ

ನೀರಾವರಿ ಅಚ್ಚು ಕಟ್ಟು ಭಾಗದ ರೈತರು ಹಾಗೂ ಕೊನೆ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು, ದೊರೆಯುವ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ. ಈ ರೀತಿಯ ಬೆಳೆ ಪದ್ದತಿಯಿಂದ ಖರ್ಚು ವೆಚ್ಚು ಕಡಿಮೆ ಆಗುವ ಜೊತೆಗೆ ಅಧಿಕ ಲಾಭ ಪಡಿಯಬಹುದಾಗಿದೆ, ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದಾಗಿದೆ. ಸಂಪ್ರದಾಯಿಕ ಪದ್ದತಿಯಲ್ಲಿ ರೈತರಿಗೆ ಲಾಭಾಂಶ ದೊರೆಯುವುದು ಅಷ್ಟ ಕಸ್ಟೇ ಆದರೆ ಕೂರಿಗೆ ಭತ್ತ ಬಿತ್ತನೆಯಿಂದ ರೈತರ ಆದಾಯ ದ್ವಿಗುಣ ಆಗುವ ಜೊತೆಗೆ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟು ಬಹುದಾಗಿದೆ. ಕೂರಿಗೆ ಬಿತ್ತನೆ ಮಾಡಿದ ಮರುದಿನ ಒಂದು ಎಕರೆಗೆ 700 ಎಂ ಎಲ್ ಪೆಂಡಿಮೈಥಿಲಿನ್ ಕಳೆ ನಾಶಕವನ್ನು 200 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಣೆ ಮಾಡಬೇಕು.
ಡಾ ಎಂ ಬಸವಣ್ಣೆಪ್ಪ. ಮುಖ್ಯಸ್ಥರು, ಕೃಷಿ ಸಂಶೋಧನೆ ಕೇಂದ್ರ, ಸಿರುಗುಪ್ಪ.

ವರದಿ :ಶೇಖರ ಹೆಚ್ ರಾರಾವಿ


Share

Leave a Reply

Your email address will not be published. Required fields are marked *