ಮಸ್ಕಿ : ಅಭಿನಂದನ್ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಆರಂಭಿಸಿದ ಯೋಜನೆಯ ಭಾಗವಾಗಿ 10,001 ಸಸಿಗಳನ್ನು ನೆಡುವ ಕಾರ್ಯಕ್ರಮದ ಭಾಗವಾಗಿ ಮಸ್ಕಿಯ ಬೆಟ್ಟ ಗುಡ್ಡಗಳಿಗೆ ಮರು ಸೊಬಗನ್ನು ನೀಡಲು ಮುಂದಾಗಿರುವ ಅಭಿನಂದನ್ ಸಂಸ್ಥೆಯು ಮಸ್ಕಿಯ ಹೊರವಲಯದಲ್ಲಿ ಇರುವಂತಹ ಬೆಟ್ಟದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಸ್ಕಿಯ ಹಿರಿಯರಾದ ಶಿವಪ್ರಸಾದ್ ಕ್ಯಾತನಟ್ಟಿ ಮಾತನಾಡಿ ಅಭಿನಂದನ್ ಸಂಸ್ಥೆಯು ಮಸ್ಕಿಯನ್ನು ಹಸಿರು ಬೃಂದಾವನ ಮಾಡಲು ಮುಂದಾಗಿದ್ದು ಪರಿಸರದ ಮೇಲು ತೋರುತ್ತಿರುವ ವಿಶೇಷ ಕಾಳಜಿಯು ಸಂತಸವನ್ನುಂಟು ಮಾಡುತ್ತಿದ್ದು ಹಾಗೆಯೇ ಈ ಸಂಸ್ಥೆಯು ಇನ್ನು ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ನಮ್ಮ ಮಸ್ಕಿಯ ಘನತೆಯನ್ನು ಹೆಚ್ಚಿಸುತ್ತಿರುವ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಸಿದರು. ಇದೇ ಸಂದರ್ಭದಲ್ಲಿ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಹನುಮಂತ ಗುಡದೂರು, ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.