ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ

ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ

Share

 

ರಾಷ್ಟ್ರೀಯ ಹೆದ್ದಾರಿ NH 161A ಬೀದರ್ ಜಿಲ್ಲೆಯ ಔರಾದ ತಾಲೂಕಿನ ಮಾರ್ಗವಾಗಿ ಮಹಾರಾಷ್ಟ್ರದ ಲಾತುರ ಹಾಗೂ ತೆಲಂಗಾಣದ ರಾಜ್ಯದ ನಾರಾಯಣಖೈಡ ಈ ರಸ್ತೆ ಮೂರು ರಾಜ್ಯದ ಜನರಿಗೆ ಜೀವ ಹಿಂಡುತಿದೆ. ಈ ರಸ್ತೆ ಹದಗೆಡಲು ಕಾರಣ. ತೆಲಂಗಾಣದಿಂದ ಮರಳು ಸಾಗಾಣಿಕೆ ಮಾಡುವಂತಹ ಲಾರಿಗಳು. ಭಾರಿ ಪ್ರಮಾಣದಲಿ ಮರಳು ಸಾಗಾಣಿಕೆಯಿಂದಾಗಿ .15ದಿನಗಳ ಹಿಂದೆ ಎರಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಘಟನೆ-ಈ ರಸ್ತೆಮೇಲೆ ನಡೆದಿದೆ. ಇನ್ನೂ ಇಬ್ಬರು ಯುವಕರು ದವಾಖಾನೆಯಲ್ಲಿ ನರಳುತ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿ ಕೂಡ ಇದಕ್ಕೆ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಣ್ಣಾರೆ ಕಂಡು ಕೂಡ ಕುರುಡರಂತೆ ಇದ್ದಾರೆ. ಆರ್. ಟಿ. ಒ ಸಹ ನೋಡಿ ಕೂಡ ಯಾವುದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ. ಕಾಶಂಪೂರ್, ಯನಗುoದಾ, ಚಿಂತಾಕಿ, ನಾಗಂಪಲ್ಲಿ,ಕರಂಜಿ ಬಿ , ಕರಂಜಿ ಕೆ ರಾಯ ಪಳ್ಳಿ, ನಿಂಗದಳ್ಳಿ, ಎಲ್ಲ ಗ್ರಾಮದ ಜನರಿಗೆ ಈ ಒಂದು ರಸ್ತೆ ಜೀವ ಹಿಂಡುತಿದೆ. ಹೇಳೋಕೆ ಮಾತ್ರ ಬೀದರ್ ಜಿಲ್ಲೆಯಲಿ ಸಚಿವರು, ಕೇಂದ್ರದ ಮಂತ್ರಿಗಳು ಇದ್ದರೂ ಕೂಡ ಈ ಸ್ಥಿತಿ ನಮ್ಮ ಬೀದರ ಜಿಲ್ಲೆಯಲ್ಲಿ ನಾವು ಕಣ್ಣಾರೆ ಕಾಣಬಹುದು.ಮತದಾನದ ವೇಳೆಯಲ್ಲಿ ಎಲ್ಲಾ ಹಳ್ಳಿಹಳ್ಳಿಗೂ ಕೂಡ ಮತದಾನ ಹಾಕಿ ಅಂತ ಬರುತ್ತಾರೆ .ಆದರೆ ಮತದಾನ ಮುಗಿದ ಮೇಲೆ ಯಾರೂ ಕೂಡ ಹಳ್ಳಿಗಳಿಗೆ ಜನರ ಸಂಕಷ್ಟ ಯಾರು ಕೇಳಲ್ಲ? ದಯವಿಟ್ಟು ಈ ಒಂದು ರಸ್ತೆಗೆ ಯಾವುದಾದರೂ ಒಂದು ಕ್ರಮ ಕೈಗೊಳ್ಳಬೇಕು. ಜನರಿಗಾಗಿ ಸುವ್ಯವಸ್ಥಿತ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು. ವರದಿ : ಸತ್ಯವಾನ ಮುಕ್ತೆದಾರ


Share

Leave a Reply

Your email address will not be published. Required fields are marked *