ಕೋಟಿ ರಾಮುನ ಯಶೋಗಾಥೆ

ಕೋಟಿ ರಾಮುನ ಯಶೋಗಾಥೆ

Share

 

ಚಂದನವನದ ಗಟ್ಟಿ ನಿರ್ಮಾಪಕ, ಹೃದಯವಂತ, ಕೋಟಿ ನಿರ್ಮಾಪಕನೆಂದೇ ಖ್ಯಾತಿಯಾಗಿರುವ ಕನ್ನಡ ದುರ್ಗಿಯಾದ ಮಾಲಾಶ್ರೀಯ ಪತಿ ರಾಮು. ರಾಮು ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನವರು. ಚಿತ್ರರಂಗದ ಆಸೆ ಮತ್ತು ಬದುಕು ಕಟ್ಟಿಕೊಳ್ಳಬೇಕೆಂಬ ಹೆಬ್ಬಯಕೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು. ಬೆಂಗಳೂರಿಗೆ ಬಂದ ಆರಂಭದ ದಿನಗಳಲ್ಲಿ ಗಾಲ್ಫ್ ಕ್ಲಬ್‌ನಲ್ಲಿ ಸರ್ವರ್ ಆಗಿ ಹಲವಾರು ದಿನಗಳವರೆಗೆ ಕೆಲಸವನ್ನು ಮಾಡಿದ್ದಾರೆ. ರಾಮು ಅವರ ಬದುಕಿನಲ್ಲೂ ಕೂಡ ಹಲವಾರು ಅವಮಾನಗಳನ್ನು ಅನುಭವಿಸಿ ಬೆಳೆದ ಹೆಮ್ಮರ. ಹೋಟೆಲ್ ಉದ್ಯೋಗದಲ್ಲಿ ಊಟ, ಬಟ್ಟೆ, ವಸತಿ, ಸಿಕ್ಕಿದ್ದರಿಂದ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು ಗಾಲ್ಫ್ ಕ್ಲಬ್‌ಗೆ ಬರುವ ಹಲವಾರು ಗಣ್ಯಾತಿಗಣ್ಯರ ಮುಂದೆ ತಮ್ಮ ಚಲನಚಿತ್ರದ ಆಸೆಯನ್ನು ಹೇಳುತ್ತಿದ್ದರು. ರಾಮು ಅವರ ಈ ಕನಸನ್ನು ವೈ.ಎನ್.ಕೆ. ಎಂಬುವವರು ಪ್ರೋತ್ಸಾಹಿಸಿ, ಶುಭ ಹಾರೈಸಿ ಸಹಾಯ ಮಾಡಿದರು. ರಾಮು ಅವರು ಏನೇ ಕೆಲಸ ಮಾಡಿದರೂ ಅವರಿಗೆ ಚಲನಚಿತ್ರದ ಮಿಡಿತ, ಮನರಂಜನೆ ಸದಾ ತುಂಬಿರುತ್ತಿತ್ತು. ಈ ಮಧ್ಯೆ ರಾಮು ಅವರು “ಚೈತ್ರದ ಪ್ರೇಮಾಂಜಲಿ” ಚಿತ್ರದ ಹಂಚಿಕೆಯನ್ನು ಕೆಲವು ಭಾಗಕ್ಕೆ ಪಡೆಯುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ೧೯೬೯ರಲ್ಲಿ ಹುಟ್ಟಿದ ರಾಮು ಅವರಿಗೆ ಚಿತ್ರಗಳ ಹಂಚಿಕೆಯಿAದ ತಮ್ಮ ಸಿಹಿ ಕನಸು ನನಸಾಗುವ ದಿಶೆಯಲ್ಲಿತ್ತು. ಹಲವಾರು ಚಿತ್ರಗಳನ್ನು ಹಂಚಿಕೆ ಮಾಡುವ ಮೂಲಕ ಚಿತ್ರಗಳ ಯಶಸ್ಸಿಗೆ ಕಾರಣರಾದರು. ಅವರು ಹಂಚಿಕೆಯಿAದ ಪಡೆದ ಲಾಭದಲ್ಲಿ ನಿರ್ಮಾಪಕರಾಗಿ “ಅಧಿಪತಿ” ಚಿತ್ರವನ್ನು ನಿರ್ಮಿಸಿದರು. ಆದರೂ ಕೂಡ ಅವರಿಗೆ ಒಳ್ಳೆಯ ಬುನಾದಿ ಸಿಕ್ಕಿದ್ದು, “ಲಾಕಪ್‌ಡೆತ್” ಚಿತ್ರದ ಮೂಲಕ. ಕೋಟಿ ಹಣವನ್ನು ಹಾಕಿ ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತೆ “ಲಾಕಪ್‌ಡೆತ್” ಚಿತ್ರ ನಿರ್ಮಿಸಿದರು. ಈ ಚಿತ್ರದ ಮೂಲಕವೇ ನಿರ್ದೇಶಕ ಓಂ ಪ್ರಕಾಶ್ ರಾವ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರಿಗೆ ಚಿತ್ರರಂಗದಲ್ಲಿ ಹೆಸರು ತಂದು ಕೊಟ್ಟಿತ್ತು. ಈ ಯಶಸ್ಸಿನಿಂದ ರಾಮು ಅವರು ಸುಮಾರು ಚಿತ್ರಗಳನ್ನು ನಿರ್ಮಿಸಿದರು. ಇವರ ಸರಳತೆ ಸಜ್ಜನಿಕೆ ಕಂಡು ಕನ್ನಡದ ಖ್ಯಾತ ನಟಿ, ಕನಸಿನ ರಾಣಿ ಎಂದೇ ಪ್ರಸಿದ್ಧರಾಗಿರುವ ಮಾಲಾಶ್ರೀರವರು ಇವರನ್ನು ಪ್ರೀತಿಸಿ ೧೯೯೫ರಲ್ಲಿ ಮದುವೆಯಾದರು. ನಂತರದ ದಿನಗಳಲ್ಲಿ ನಟಿಯನ್ನೇ ಮನೆಯಲ್ಲಿಟ್ಟುಕೊಂಡು ಚಿತ್ರ ಮಾಡದಿದ್ದರೆ ಹೇಗೆ ? ವರ್ಷಕ್ಕೆ ೧ ರಂತೆ ಮಾಲಾಶ್ರೀಯವರನ್ನೇ ಹಾಕಿಕೊಂಡು ಚಿತ್ರ ಮಾಡುತ್ತಾ ಬಂದರು. ಇವರದೊಂದು ಮುದ್ದಾದ ಸಂಸಾರ. ಪ್ರೀತಿಯ ಜೋಡಿಗೆ ಅಮೃತ ಎಂಬ ಮಗಳು, ದೇವದಾಸ್ ಎಂಬ ಮಗನಿದ್ದಾನೆ. ದೇವದಾಸ್ ಓರ್ವ ಬಾಲನಟನಾಗಿ ೨೦೦೭ರಲ್ಲಿ ಆನಂದ ಭೈರವಿ ಎಂಬ ಮಲಯಾಳಿ ಚಿತ್ರದಲ್ಲಿ ನಟನೆ ಮಾಡಿದರು. ಮುಂದೆ ಹಲವಾರು ನಟನೆಯ ಜೊತೆಗೆ ಬರವಣಿಗೆಯಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ಮಾಪಕ ರಾಮುರವರು “ಲಾಕಪ್‌ಡೆತ್” ಚಿತ್ರದಿಂದ ತಮಿಳಿನ “೯೯” ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುವ ಮೂಲಕ ಚಿತ್ರದ ಮಧ್ಯೆ ಹಲವಾರು ಏಳುಬೀಳುಗಳನ್ನು ಕಂಡಿದ್ದಾರೆ. ೧೯೯೫ರ ನಂತರ ಹೆಚ್ಚಾಗಿ ಮಾಲಾಶ್ರೀ ಅವರ ಚಿತ್ರಗಳ ನಿರ್ಮಾಣ ಮಾಡುತ್ತಾ ಬಂದಿದ್ದು, ಬೇರೆ ಚಿತ್ರಗಳು ಕಮ್ಮಿ ಎನ್ನಬಹುದು. “೯೯” ಚಿತ್ರವನ್ನು ಹೊರತುಪಡಿಸಿದರೆ ಇನ್ನು ಬಿಡುಗಡೆಯಾಗದ ಪ್ರಜ್ವಲ್ ದೇವರಾಜ್, ಅಭಿನಯದ ಅರ್ಜುನ್‌ಗೌಡ ಚಿತ್ರವು ಅತ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರವು ತೆರೆಗೆ ಬರುವ ಮುನ್ನ ಕೋವಿಡ್-೧೯ ಮಹಾಮಾರಿಗೆ ೨೦೨೧ರ ಏಪ್ರಿಲ್ ೨೬ರಂದು ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಇಹಲೋಕವನ್ನು ತ್ಯಜಿಸಿದರು. ರಾಮು ಓರ್ವ ಚಿಂತಕ ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವುಳ್ಳ ವ್ಯಕ್ತಿ. ತ್ಯಾಗಿ ತ್ಯಾಗಕ್ಕೆ ಉದಾಹರಣೆ ಹೇಳಬೇಕೆಂದರೆ, ಪುನೀತ್ ರಾಜ್‌ಕುಮಾರ್‌ರವರಿಗೆ “ರಾಜಕುಮಾರ” ಟೈಟಲ್ ಬಿಟ್ಟು ಕೊಟ್ಟಿರುವುದು. ಹೀಗೆ ಹಲವಾರು ಬಹುಮುಖ ಪ್ರತಿಭೆ ತಮ್ಮ ೫೨ನೇ ವಯಸ್ಸಿನಲ್ಲೇ ಕರೋನಾ ಮಾರಿಗೆ ಬಲಿಯಾಗಿದ್ದು, ಕನ್ನಡ ನಾಡಿಗೆ ತುಂಬಲಾರದ ನಷ್ಟ.


Share

Leave a Reply

Your email address will not be published. Required fields are marked *